.jpg)
ಪ್ರೀತಿ ಆಕಸ್ಮಿಕವಾಗಿಯೇ ಶುರುವಾಗುವುದು, ಯಾರೂ ಕೂಡ ನಾನು ಅವಳನ್ನು ಅಥವಾ ಅವನನ್ನೇ ಪ್ರೀತಿಸುವುದು ಎಂದು ಚಿಕ್ಕಂದಿನಿಂದ ಗುರಿಯಾಗಿ ಇಟ್ಟುಕೊಂಡಿರುವುದಿಲ್ಲ,
ಮೊದಲು ಶುರುವಾಗುವುದು ಪ್ರೀತಿ, ನಗು, ನೋಟ, ಜಗಳ ಬೇಟಿ, ಲೆಟರ್ ಮೂಲಕವಾಗಿ ಪ್ರಾರಂಭವಾಗಬಹುದು, ಆದರೆ ನನ್ನ ಸ್ನೇಹಿತರು ಹೇಳುವ ಪ್ರಕಾರ ಪ್ರೀತಿ ಶುರುವಾದ್ದರಿಂದಲ್ಲಿ, ತಿಳಿಯದೇ ಅಂತಿಮ ಘಟ್ಟದಲ್ಲಿ ತಿಳಿಯಬಹುದು , ಪ್ರೀತಿಗೆ ಅಗೋಚರವಾದ ಶಕ್ತಿ ಇದೆ. ಹಾಗೆಯೇ , ಸುಮ್ಮನೆ ಟೈಂಫಾಸ್ ಗೆ ಪ್ರೀತಿ ಮಾಡುವವರೂ ಇದ್ದಾರೆ, ನನ್ನ ಕೆಲ ಸ್ನೇಹಿತರು ಹಾಸ್ಟಲ್ ನಲ್ಲಿ ಇರೋದು ಟೈಂಪಾಸ್ ಆಗ್ತಾ ಇಲ್ಲ ಯಾರನ್ನದರೂ ಪ್ರೆಂಡ್ ಮಾಡ್ಕೊಡೆ , ಇಲ್ಲಂದ್ರೆ ನಂಬರ್ ಕೊಡು ಅಂತ ಕೇಳಿದುಂಟು ,
ಆದುನೀಕರಣ ಬದಲಾದಂತೆ ಈಗ ಇರುವುದು ನೆಟ್ ಎಂಬ ಆಯುಷ , ಅಂದರೆ ಚಾಟಿಂಗ್ ಎಂಬ ಭೂತ , ನಿಮಗೆ ಯಾರು ಸ್ನೇಹಿತರು ನಂಬರ್ ಕೊಟ್ಟಿಲ್ಲ ಅಂದ್ರೆ ಏನಂತೆ , ಇದೆಯಲ್ಲ ಚಾಟಿಂಗ್ (ನೆಟ್), ಇದರಿಂದ ಅನೇಕ ಮಂದಿ ಸಿಗುತ್ತಾರೆ ,
ಆದರೆ ಟೈಂಪಾಸ್ ಮಾಡೋದಕ್ಕೆ ಅದ್ರಲ್ಲೂ ಪ್ರೀತಿನೇ ಬಲಿಕೊಡಬೇಕಾ, ಟೈಂ ಯಾವಾಗ್ಲೂ ಪಾಸ್ ಆಗ್ತಾನೇ ಇರುತ್ತೆ ನಾವು ಅದನ್ನು ಹೇಗಾದರೂ ಕಳೆಯಲು ಮನಸ್ಸು ಮಾಡ್ಬೇಕು ಅಷ್ಟೆ ,ಹೇಗೂ ಇನ್ ಪದವಿ ಮುಗಿತು ಮತ್ತೇ ಇನ್ನೇನು ನೀನ್ ಪ್ರೀತ್ಸಿರೋ ಹುಡುಗಿ ಜತೆ ಮದುವೆ ಯಾವಾಗ ಅಂತ ಕೇಳೀದ್ರೆ ಅದಕ್ಕೆ ಉತ್ತರ ನನಗೆ ಮೆಟ್ನಾಗೆ ಹೆಡೆದ ಹಾಗಿತ್ತು ,
ಏನು ಅವಳ ಜೊತೆ ಮದುವೆನಾ ! ವಾಟ್ ಮ್ಯಾನ್ ! ನಾನೆಲ್ಲಿ ಅವಳೆಲ್ಲಿ ನನಗೆ ಮದುವೆ ಹುಡುಗಿ ಬೇರೆ ತರಾನೆ ಇರಬೇಕು ಅಂತ ಕನಸಿದೆ, ಆದರೆ ಇವಳ ಜೊತೆ ಹೇಗೂ ಈ ಊರಲ್ಲಿ ಯಾರೂ ಪ್ರೆಂಡ್ಸ್ ಇರಲಿಲ್ಲ ಅಂತ ಅವಳನ್ನು ಪ್ರೆಂಡ್ ಮಾಡ್ಕೊಂಡೆ , ಸುಮ್ನೆ ಒಂದು ತಿಂಗಳು ಸುತ್ತಾಡಿ, ಮಜಾ ಮಾಡನಾ ಅಂತ ಅಷ್ಟೆ , ಆದರೆ ಪ್ರೀತಿ ಬಲೆಗೆ ಬಿದ್ದ ಹುಡುಗಿಗೆ ಅರಿವಾದದ್ದು ಹುಡುದ ಕೈಕೊಟ್ಟಾಗ .
ಈ ಹುಡುಗ (ಹುಡುಗಿಯರಿಗೆ) ಪ್ರೀತಿ ಅಂದ್ರೆ ಅಷ್ಟು ಸಸಾರವಾಗಿ ಬಿಟ್ಟಿದೆಯಾ ಅನ್ನಿಸಿತು , ಟೈಂಪಾಸ್ ಪ್ರೀತಿಗೂ ಬಾಹ್ಯ ತೋರಿಕೆಯಲ್ಲಿ ಹೋಲಿಕೆ ಇದ್ದರೂ ಅಂತರಂಗದಲ್ಲಿ ನಿಜವಾದ ಪ್ರೀತಿಗೆ ಅವರದೇ ಸ್ಥಾನವಿದೆ .
ಈಗಿನ ಪೀಳಿಗೆಯಲ್ಲಿ ಟೈಂಫಾಸ್ ಪ್ರೀತಿಯಷ್ಟು ಕೆಟ್ಟ ಹವ್ಯಾಸ ಇನ್ನೊಂದಿಲ್ಲ ಇದು ಕೊನೆಗೊಳ್ಳುವ ವುದು ಅನಾಹುತದಿಂದ ಅಷ್ಟೆ , ಅದು ಆತ್ಮಹತ್ಯಗೂ ಎಡೆಮಾಡುವುದೆಂದರೆ ತಪ್ಪಿಲ್ಲ, ಪ್ರೀತಿಯಲ್ಲಿ ಒಂದು ಎಳ್ಳಾಷ್ಟಾದರೂ ಸ್ವಾರ್ಥವಿರೆದೆ ಇರಲಾರದು , ಆದರೆ ಅದೇ ವಿಷವಾಗಬಾರದು . ಪ್ರೀತಿಸಲು ನನ್ನ ಪ್ರಕಾರ ಮೂರು ಗುಣಗಳು ಅಗತ್ಯ ಒಂದು ತನ್ನನ್ನು ತಾನು ಪ್ರೀತಿಸಿ ನಂತರ ಪ್ರೀತಿಯನ್ನು , ಪ್ರೀತಿಸುವುದು ಎರಡೂ ಕೂಡ , ನಂತರ ಜೀವನ ನಿರ್ವಹಿಸಲು ಆರ್ಥಿಕವಾಗಿ ಸಬಲವಾಗಿದ್ದಾರೆ ಹುಡುಗ(ಗಿ)ಯನ್ನು ಪ್ರೀತಿಸುವುದು,
ನನ್ನ ಕೆಲವು ಗೆಳೆಯ/ಗೆಳತಿಯರ ಮೊಬೈಲ್ ನಲ್ಲಿ ಬಹಳ ಹುಡುಗಿಯರ ನಂಬರ್ ಇದ್ದವು ನಾನು ಕೇಳಿದಾಗ ಇವೆಲ್ಲ (ಜಸ್ಟ್ ಫ್ರೆಂಡ್ ) ಗಳು ಕೊನೇದು ರಿಯಲ್ ಲೌವ್ ಅಂದ ,
ಆದರೆ ಇವನು ಅವಳ ಮೊದಲನೇ ಟೈಂಪಾಸ್ (ಬಕ್ರಾ) ಹುಡುಗ/ಗಿ , ಅವಳ ರಿಯಲ್ ಹೀರೋನೇ ಬೇರೆ ಹೀಗಿರುವಾಗ ರೋಮೀಯೋ ಜೂಲಿಯಟ್ ನೂರಲ್ಲಿ ಒಂದು ಅಷ್ಟೆ .
ಕೆಲವೊಮ್ಮೆ ಹುಡುಗಿ ಜೂಲಿಯಟ್ಗಿಂತ ಒಂದು ಪಟ್ಟು ಹೆಚ್ಚು ಪ್ರೀತಿಸಿದರೂ , ಹುಡುಗ ಮಾತ್ರ ಮಾಡುವುದು ಟೈಂಫಾಸ್ , ಇವಳಿಗೆ ತಿಳಿದ ಮೇಲೆ ಏನಾದರೂ ಸೆಲೆಕ್ಟ್ ಮಾಡ್ಕೊತ್ತಾರೆ . ಹೀಗಿರುವಾಗ ಹುಡುಗ ಹುಡುಗಿಯ ನಡುವೆ ಇರುವ ಪ್ರೀತಿಯ ಸೇತುವೆ ಟೈಂಪಾಸ್ಗಾಗಿ ಎನ್ನುವ ಕಾರಣಕ್ಕೆ ಮುರಿದು ಬಿದ್ದರೆ ಯಾರು ಹೊಳೆಹಾರುವರೋ ಗೊತ್ತಿಲ್ಲ .
ಹೀಗೆ ಕಾಲೇಜ್ ವಿಶ್ವವಿದ್ಯಾನಿಲಯಗಳಲ್ಲಿ ದಿನ ನಿತ್ಯ ಅದೆಷ್ಟು ಪ್ರೇಮಿಗಳು ಅಣಬೆಗಳಂತೆ ಹುಟ್ಟುತ್ತಾರೋ ಗೊತ್ತಿಲ್ಲ, ದರೆ ಲಾಭ ಇರುವುದೆಂದರೆ ಪ್ಯಾನ್ಸಿ ಗ್ರೀಟಿಂಗ್ಸ್ ಅಂಗಡಿಯವರಿಗೆ ಮಾತ್ರ .ಇದನ್ನು ಓದಿದ ನಿಜವಾದ ಪ್ರೀಮಿಗಳಿಗೆ ಹಾಗು ಟೈಂಪಾಸ್ ಪ್ರೇಮಿಗಳಿಗು ಬೇಸರವಾದರೆ ಕ್ಷಮಿಸಿ ಆದರೆ ಈ ಅನಿಸಿಕೆಗಳಲ್ಲಿ ಸಾಕಷ್ಟು ಸತ್ಯ ಇದೆ ಎನ್ನುವುದು ನನ್ನ ಭಾವನೆ .
ರೂಪ.ಎಸ್