Sunday, August 8, 2010

ಮಳೆ................?



ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತಲ್ಲವೇ ?
ಮಳೆ ಜೀವನಾಧಾರವಾದುದು, ಪ್ರಕೃತಿಯ ಉಳುವಿನ ಸಂಕೇತ, ಮಳೆ ಬಿದ್ದೊಡನೆ ಅದೆಷ್ಟು ಜೀವಗಳೀಗೆ ಸಂತಸ!
ರೈತರಿಗೆ ಬಿತ್ತನೆಗೆ ಭೂಮಿ ಹದವಾಯಿತು, ಮೃದುವಾಯಿತೆಂಬ ಖುಷಿ, ಪುಟ್ಟ ಮಕ್ಕಳಿಗೆ ಮನೆ ಮುಂದೆ ನಿಂತ ನೀರಲ್ಲ ಕಾಗದದ ದೋಣಿ ಬಿಡುವ ಸಂಬ್ರಮ , ಸುರಿದ ಮಳೆಯಿಂದ ಹುಟ್ಟಿದ ಚಳಿಗೆ ಬೆಚ್ಚಗೆ ಹೊದ್ದುವ ಮಲಗುವ , ಬಿಸಿಬಿಸಿ ಪಕೋಡ ಬೋಂಡ ತಿನ್ನುವ ಉಮೇದು ಹಲವರಿಗೆ , ಕಾದು ಬೆಂಡಾಗಿದ್ದ ಧರಿತ್ರಿ
ತಂಪಾದಳಲ್ಲಾ! ಧಗೆ ಅಡಗಿತಲ್ಲಾ ಎಂಬ ಸಮಾಧಾನ ಮೊದಲ ಮಳೆಯ ಮಣ್ಣಿನ ವಾಸನೆ ಅನುಭವಿಸುವ ರಸಿಕತೆ ಕೆಲವರಿಗೆ ಸುರಿದ ಮಳೆಯಿಂದ ಸಿಕ್ಕ ಅನಿರೀಕ್ಷಿತ ಬಿಡುವಿನಿಂದ ಬಹಳ ದಿನಗಳಿಂದ ಉಳಿದ ಬಿಟ್ಟಿದ್ದ ಕೆಲಸಗಳನ್ನು ಪೂರೈಸುವ ಉತ್ಸಾಹ ಮತ್ತೆ ಕೆಲವರಿಗೆ.......................
ಮತ್ತೆ ಅದೆಷ್ಟು ಜನರಿಗೆ ಅದಿನ್ನಿನ್ಯಾವ ಬಗೆಯ ಸಂತಸವೋ ಉಣಿಸಲಾಗದಂತಹುದು !
ಬಿಡ ಬಿಡದೇ ಮೂರು ದಿವಸಗಳಿಂದ ಸುರಿಯುತ್ತಿರುವ ಬಿರು ಮಳೆಯಿಂದ ಇವನಂತೂ ಕಂಗಾಲಾಗಿದ್ದಾನೆ , ಒಂದು ದಿನ ಸಾಲ ತಂದು ಹೊಟ್ಟೆ ತುಂಬಿಸಿದ್ದಾಗಿದೆ , ಮತ್ತೆರಡು ದಿನದಿಂದ ಉಪವಾಸ ಜೊತೆಗೆ ಮನೆಯಿಡೀ ಸೋರಿ ಕರೆಯಂತಗಿದೆ, ಮೂಲೆಯಲ್ಲೆಲ್ಲೋ ಇವನ ಹೆಂಡತಿ, ಮೂವರು ಹಸಿದ ಮಕ್ಕಳು ಇವನತ್ತಲೇ ತಮ್ಮ ಕಣ್ಣು ಹರಿಸಿ ಕುಳಿತಿದ್ದಾರೆ. ಇವನಿಗೆ ಅವರನ್ನು ನೋಡುವ ಧೈರ್ಯವಿಲ್ಲ. ಅತ್ತ ನೋಡಿದೊಡನೆ ಅಪ್ಪ ಹಸಿವು ಎಂದು ಮಗುವೊಂದು ನುಡಿದು ಬಿಟ್ಟರೆ ಇವನೇನು ಮಾಡಬೇಕು ? ಸುರಿವ ಮಳೆಗೆ ಶಾಪ ಹಾಕಿ ಸಾಕಾಗಿದ್ದಾನೆ.
ಇವನೊಬ್ಬ ಪುಟ್ ಪಾತ್ ವ್ಯಾಪಾರಿ ಬೀದಿಯಲ್ಲಿ ತನ್ನ ಸಣ್ಣ ಪುಟ್ಟ ಸಾಮಾನುಗಳನ್ನು ಹರಿವಿ ದಿನವಡೀ ಕುಳಿತದ್ದು , ಮಾರಾಟವಾದ ದಿನದಿಂದ ಇವನ ಸಂಸಾರಕ್ಕೆ ಉಪವಾಸವೇ ಗತಿ, ಇವನೊಬ್ಬನದೇ ಸಮಸ್ಯೆಯಲ್ಲ ಇದನ್ನೇ ನಂಬಿ ನೂರಾರು ಜನ ಬದುಕುತ್ತಿದ್ದಾರೆ , ಮಳೆಗಾಲದಂತೂ ಉಪವಾಸ ಅನಿವಾರ್ಯ , ಕೆಲವೊಮ್ಮೆ ಒಂದು , ಎರಡು ದಿನ ಮತ್ತೆ ಹಲವಾರು ಐದಾರು ದಿನ ಧೀರ್ಘ ಮಳೆ ಬಿಡದೆ ಹುಯ್ಯವ ಇಂತಹ ದಿನಗಳಲ್ಲಿ ಯೋಚಿಸುತ್ತಿದ್ದಾರೆ ಹೇಗೆ ತನ್ನ ಸಂಸಾರದ ಹೊಟ್ಟೆ ತುಂಬುವುದು ? ಭಿಕ್ಷೆ ಬೇಡಿ ..........................ಕಳ್ಳತನ ಮಾಡಿ ......... ಅಥವಾ .....................
ಇಲ್ಲ ! ಇವೆಲ್ಲ ತಾನು ಮಾಡಲಾರೆ , ತನಗೆ ಗೊತ್ತಿರುವುದು , ಪುಟ್ ಪಾತ್ ವ್ಯಾಪಾರ ವೊಂದೇ ! ಧೋ ಎಂದು ಸುರಿವ ಮಳೆಗೆ ಮನ ಪೂರ್ತಿ ಬೈದು ಹಗುರವಾಗಬೇಕೆಂದು ಕತ್ತನ್ನು ಆಕಾಶ ದೆಡೆಗೆ ಎತ್ತಿದ್ದಾನೆ , ಅವನಿಗೆ
ಅರಿವಿಲ್ಲದೇ ಅವನ ಕಣ್ಣಿಂದ ಧಾರಕಾರ ನೀರು ಹರಿದು ತೊಡಗದೆ , ಎಷ್ಟೆಲ್ಲಾ ಜನರಿಗೆ ಸಂತಸ ನೀಡುವ ಮಳೆಯೇ ನನ್ನ ನನ್ನಂತಹ ಕೆಲವೇ ಕೆಲವರಿಗೆ ತೊಂದರೆಯಾದರೂ ಸರಿಯೇ ನೀ ಸುರಿಯಲೇಬೇಕು , ಎಂದು ಎದೆ ತುಂಬಿ ಪ್ರಾಥಿಸುತ್ತೇನೆ , ಈಗ ಮಳೆ ನಿಂತಿದೆ , ಮತ್ತೆ ಅವನ ವ್ಯಾಪಾರ ಭರದಿಂದ ಪ್ರಾರಂಭವಾಗಿದೆ..................,

* ರೂಪ.ಎಸ್

8 comments:

  1. hi roopa ...

    nice write up ....thanks

    ReplyDelete
  2. innu baribohudagitthu.... chennagide... aadare...swalpa alli illi sankalana bekithu....

    ReplyDelete
  3. mangalore nalli goodangadi etti hakutiddare

    ReplyDelete
  4. ಭಾವನೆಗಳಿಗೆ ಮೈಯೊಡ್ಡಿ ಜಿನುಗುವ ಮೇಘದ ಮುತ್ತಿನ ತೋರಣ ಯಾರಿಗೆ ಹೇಳುವುದು ನಿರಾಕರಣ?ಅನಮಿಕೆಯ ಅಂತರಂಗದ ಮಾನವೀಯತೆ ಮಳೆಯನ್ನ ವಿಷಯವಾಗಿ ಆಯಿಕೆ ಮಾಡಿಕೊಂಡಿದ್ದು .ಲೇಖನದ ಯಶಸಿನ ಮೊದಲ ಹಂತ .ಅನಮಿಕೆ ನಿನ್ನ ಶಾಹಿಯ ರಂಗೋಲಿ ಪ್ರರಮ್ಬದಲ್ಲಿ ಸಹಜವಾದ ಅದೇ ಹಳೆ ಭಾವನೆಗೆ ಒಗ್ಗರಣೆ ಹಾಕಿದ ಫ್ರೈಡ್ ರೈಸ್ ನ ಅನುಭವ ಆದರೆ ವಿಷಯದ ವಿಸ್ತರಣೆ ಗಮ್ಬಿರವಾದ ರುಚಿಯನ್ನು ನೀಡುವುದು ಮತ್ತೊಂದು ಗುಟ್ಟು .ಲೇಖನ ದ ಶೈಲಿಯಲ್ಲಿ ಹೊಯಿಸಳರ ಶಿಲ್ಪಿ ಕಲೆಗಳ ವೈವಿದ್ಯ .ವಿಷಯವನ್ನ ಇನ್ನಷ್ಟು ಆಳವಾಗಿ ಹೇಳಬಹುದಿತ್ತೇನೋ. ಯಾಕೆಂದರೆ ಎಲ್ಲರ ಅನುಭವದ,ಗ್ರಹಿಕೆಯ ವಿಸ್ತಾರ,ಪ್ರಮಾಣ, ಎಲ್ಲವು ವಿಭಿನ್ನ ಅಂತೆಯೇ ನಿಮ್ಮ ಲೇಖನಕ್ಕೆ ಈ ಕಾರಣದಿಂದ ಆಗಿಲ್ಲ ಯಾವುದೇ ಭಿನ್ನ. ಮಳೆ ಎಂಬ ಶೀರ್ಷಿಕೆ ಬದಲಿಗೆ ನಿಮ್ಮ ಪದ ಭಂಡಾರ ಮತ್ತಷ್ಟು ಶೀರ್ಷಿಕೆಗಳ ಹೂ ಗುಚ್ಚವನ್ನು ಶೋಧಿಸಬಹುದ್ದಿತ್ತು ಆದರು ಮಳೆಯಲ್ಲೇ ಎಲ್ಲ ಇದೆ.ಮಳೆ ಸಾಕಳವ್ವೆ ೨ ಅಕ್ಷರ ಕಾಣದ ಸ್ಪರ್ಶದ ಅನುಭವದ ಪೂರಕ ಅನುಭವ,ಅಕ್ಕಮಹಾದೇವಿ ಕಂಡ ಚೆನ್ನ ಮಲ್ಲಿಕಾರ್ಜುನನ ಅನುಭಾವದ ಅನುಭವ,ಉತ್ತರದ ಜನತೆಯ ತತ್ತರ ನಮ್ಮೆಲ್ಲರ ಮಾನವಿಯತೆಯ ಹೊರೆ ಹಚ್ಚಿದ ಮನ್ಧರ .ಮೇಘ ರಾಜನ ಸ್ಪರ್ಶ ಮಣಿ ನಿನ್ನ "ಮಳೆ" ಅನಾಮಿಕೆಯ ಅಂತರಂಗದ ಮೃದಂಗಕ್ಕೆ ರಾಧೆಯ ಕೊಳಲಿನ ಗಾನ ..ನೈಸ್ ಕಣೆ:

    ReplyDelete